ಪಾಕಿಸ್ತಾನದ ವಿರುದ್ಧ ಕೊಹ್ಲಿ ಮುರಿದ ದಾಖಲೆ ಒಂದಾ ಎರಡಾ!!: ಇಲ್ಲಿದೆ ನೋಡಿ ಪಟ್ಟಿ

 ಇನ್ನು ಈ ಪಂದ್ಯದಲ್ಲಿ ಟೀಮ್ ಇಂಡಿಯಾದ ಅನುಭವಿ ಕ್ರಿಕೆಟಿಗ ವಿರಾಟ್ ಕೊಹ್ಲಿ 47ನೇ ಶತಕ ಸಿಡಿಸಿ ಅಬ್ಬರಿಸಿದ್ದಾರೆ. ಅಮೋಘ ಶತಕದ ಜೊತೆಗೆ ಟೀಮ್ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ ಈ ಪಂದ್ಯದಲ್ಲಿ ಹಲವು ದಾಖಲೆಗಳನ್ನು ಬರೆದಿದ್ದಾರೆ. ಹಾಗಾದರೆ ವಿರಾಟ್ ಕೊಹ್ಲಿ ಈ ಪಂದ್ಯದಲ್ಲಿ ಮುರಿದಿರುವ ಪ್ರಮುಖ ದಾಖಲೆಗಳು ಯಾವುದು? ಇಲ್ಲಿದೆ ಆ ಬಗೆಗಿನ ಮಾಹಿತಿ.


ಅತಿ ವೇಗವಾಗಿ 13,000 ರನ್


ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಅತ್ಯಂತ ವೇಗವಾಗಿ 13,000 ರನ್‌ಗಳನ್ನು ದಾಖಲಿಸಿದ ಆಟಗಾರ ಎನ್ನುವ ದಾಖಲೆ ಬರೆದಿದ್ದಾರೆ. ಇದಕ್ಕೂ ಮುನ್ನ ಸಚಿನ್ ತೆಂಡೂಲ್ಕರ್ ಈ ದಾಖಲೆಯನ್ನು ಹೊಂದಿದ್ದರು. 2004ರಲ್ಲಿ ಸಚಿನ್ ತೆಂಡೂಲ್ಕರ್ ಪಾಕಿಸ್ತಾನದ ವಿರುದ್ಧವೇ ರಾವಲ್ಪಿಂಡಿಯಲ್ಲಿ ನಡೆದ ಪಂದ್ಯದಲ್ಲಿ 321ನೇ ಇನ್ನಿಂಗ್ಸ್‌ನಲ್ಲಿ ಈ ಸಾಧನೆ ಮಾಡಿದ್ದರು. ಆದರೆ ವಿರಾಟ್ ಕೊಹ್ಲಿ ಈ ಸಾಧನೆಗಾಗಿ 267 ಇನ್ನಿಂಗ್ಸ್‌ಗಳನ್ನು ಮಾತ್ರವೇ ಬಳಸಿಕೊಂಡಿದ್ದಾರೆ.



ಏಷ್ಯಾಕಪ್‌ನಲ್ಲಿ ದಾಖಲೆಯ ಜೊತೆಯಾಟ


ಇನ್ನು ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಕೆಎಲ್ ರಾಹುಲ್ ಜೊತೆಗೆ ಸೇರಿಕೊಂಡು ಈ ಪಂದ್ಯದಲ್ಲಿ ಭರ್ಜರಿ 233 ರನ್‌ಗಳ ಜೊತೆಯಾಟದಲ್ಲಿ ಭಾಗಿಯಾದರು. ಇದು ಏಷ್ಯಾಕಪ್ ಟೂರ್ನಿಯ ಇತಿಹಾಸದಲ್ಲಿಯೇ ಅತ್ಯಂತ ಗರಿಷ್ಠವಾದ ಜೊತೆಯಾಟ ಎನ್ನುವ ದಾಲೆಗೆ ಪಾತ್ರವಾಗಿದೆ.


ಏಷ್ಯಾಕಪ್‌ನಲ್ಲಿ ಮತ್ತೊಂದು ದಾಖಲೆ


ಇನ್ನು ವಿರಾಟ್ ಕೊಹ್ಲಿ ಎಷ್ಯಾಕಪ್ ಟೂರ್ನಿಯ ಇತಿಹಾಸಲ್ಲಿ ಮೂರನೇ ದ್ವಿಶತಕದ ಜೊತೆಯಾಟದಲ್ಲಿ ಭಾಗಿಯಾದ ದಾಖಲೆ ಬರೆದಿದ್ದಾರೆ. ಈ ಸಾಧನೆ ಏಷ್ಯಾದ ಯಾವ ಕ್ರಿಕೆಟಿಗನಿಂದಲೂ ಈ ಟೂರ್ನಿಯಲ್ಲಿ ಈವರೆಗೆ ಸಾಧ್ಯವಾಗಿಲ್ಲ ಎನ್ನುವುದು ಗಮನಾರ್ಹ.


ಮೊದಲ ಬ್ಯಾಟಿಂಗ್‌ನಲ್ಲಿ ಎರಡನೇ ಅತಿ ಹೆಚ್ಚಿನ ಸ್ಕೋರ್


ಇನ್ನು ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ 94 ಎಸೆತಗಳಲ್ಲಿ ಭರ್ಜರಿ 122 ರನ್‌ಗಳನ್ನು ಬಾರಿಸಿದ್ದಾರೆ. ಇದು ಏಕದಿನ ಮಾದರಿಯ ಏಷ್ಯಾ ಕಪ್ ಟೂರ್ನಿಯಲ್ಲಿ ಮೊದಲು ಬ್ಯಾಟಿಂಗ್ ಮಾಡುವ ಸಂದರ್ಭದಲ್ಲಿ ಭಾರತೀಯ ಬ್ಯಾಟರ್‌ನಿಂದ ದಾಖಲಾದ ಎರಡನೇ ಗರಿಷ್ಠ ಸ್ಕೋರ್ ಎನಿಸಿಕೊಂಡಿದೆ. ಶಿಖರ್ ಧವನ್ 2018 ರಲ್ಲಿ ದುಬೈ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಹಾಂಗ್ ಕಾಂಗ್ ವಿರುದ್ಧ 127 ರನ್ ಗಳಿಸಿದ್ದು ಭಾರತೀಯ ಬ್ಯಾಟರ್‌ನಿಂದ ದಾಖಲಾದ ಹೈಯೆಸ್ಟ್ ಸ್ಕೋರ್.


ಪ್ರೇಮದಾಸ ಕ್ರೀಡಾಂಗಣದಲ್ಲಿ ಕೊಹ್ಲಿ ಅಬ್ಬರ


ಕೊಲಂಬೊದ ಆರ್ ಪ್ರೇಮದಾಸ ಸ್ಟೇಡಿಯಂನಲ್ಲಿ ಏಕದಿನ ಮಾದರಿಯಲ್ಲಿ ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿ ಮೂರನೇ ಅತಿ ಹೆಚ್ಚಿನ ಸ್ಕೋರ್ ಗಳಿಸಿದ ಸಾಧನೆ ಮಾಡಿದ್ದಾರೆ. ಇದಕ್ಕೂ ಮುನ್ನ 131 ಮತ್ತು ಔಟಾಗದೆ 128 ಸ್ಕೋರ್‌ಗಳನ್ನು ಕುಡ ಕೊಹ್ಲಿಯೇ ಈ ಕ್ರೀಡಾಂಗಣದಲ್ಲಿ ಬಾರಿಸಿ ಮೊದಲ ಎರಡು ಸ್ಥಾನದಲ್ಲಿಯೂ ಅವರೇ ಇದ್ದಾರೆ.



ಸಚಿನ್, ಜಯಸೂರ್ಯ ದಾಖಲೆ ಸಮ


ಇನ್ನು ಕೊಲಂಬೊದ ಆರ್ ಪ್ರೇಮದಾಸ ಸ್ಟೇಡಿಯಂನಲ್ಲಿ ಅತಿ ಹೆಚ್ಚಿ ಶತಕ ಸಿಡಿಸಿದ ಆಟಗಾರರ ಪಟ್ಟಿಗೆ ವಿರಾಟ್ ಕೊಹ್ಲಿ ಕೂಡ ಸೇರಿಕೊಂಡಿದ್ದಾರೆ. ಈ ಕ್ರೀಡಾಂಗಣದಲ್ಲಿ ಸಚಿನ್ ತೆಂಡೂಲ್ಕರ್ ಮತ್ತು ಸನತ್ ಜಯಸೂರ್ಯ ನಾಲ್ಕು ಶತಕಗಳನ್ನು ಸಿಡಿಸಿದ್ದರು. ಇದೀಗ ವಿರಾಟ್ ಕೊಹ್ಲಿ ಕೂಡ ಈ ಕ್ರೀಡಾಂಗಣದಲ್ಲಿ ಅಷ್ಟೇ ಶತಕ ಸಿಡಿಸಿದ್ದಾರೆ.



VIRATKOHLI👑

CENTURY CELEBRATION🎉🎊🍾


ಕಾಮೆಂಟ್‌ಗಳು